ಮೌಲ್ಯಗಳು


ವಿಶ್ವವಿದ್ಯಾನಿಲಯವು ಮಂಡಳಿಯ ಮಾರ್ಗದರ್ಶನದಿಂದ ತನ್ನ ಗುರಿ ಮುಟ್ಟುವುದಕ್ಕೆ ಈ ಕೆಳಗಿನ ಸಿದ್ಧಾಂತಗಳನ್ನು ಪಾಲಿಸುತ್ತಿದೆ.
ಶಿಕ್ಷಣ: ವಿಶ್ವವಿದ್ಯಾನಿಲಯದ ಮಂಡಳಿಯು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಎಲ್ಲರ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು  ಉತ್ತಮ ವಿದ್ಯಾಭ್ಯಾಸಕ್ಕಾಗಿ ಒಳ್ಳೆಯ ವಾತಾವರಣವನ್ನು ಸೃಷ್ಟಿಸಿದೆ.

ಗುಣಮಟ್ಟ:

ವಿಶ್ವವಿದ್ಯಾನಿಲಯದ ಮಂಡಳಿಯು ತನ್ನ ಎಲ್ಲಾ ವಿದ್ಯಾಭ್ಯಾಸದ ಪ್ರೋಗ್ರಾಂಗಳಲ್ಲಿ ಉತ್ತಮ ಗುಣಮಟ್ಟ ಕೊಡುವುದರ ಬಗ್ಗೆ ದೃಢ ನಿರ್ಧಾರವನ್ನು ಹೊಂದಿದೆ.
ದೃಢತೆ: ವಿಶ್ವವಿದ್ಯಾನಿಲಯದ ಮಂಡಳಿಯು ತನ್ನ ಎಲ್ಲಾ ಕೆಲಸಗಳನ್ನು ಮತ್ತು ಸಾರ್ವಜನಿಕ ನಿರೂಪಣೆಯನ್ನು ನೈತಿಕತೆಯಿಂದ ಮಾಡುತ್ತದೆ. ತನ್ನ ಕ್ಷೇತ್ರದ ಎಲ್ಲಾ ಮೌಲ್ಯಮಾಪನವನ್ನು ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ, ವಿಧೇಯವಾಗಿ ಮಾಡುತ್ತದೆ.

ವೈವಿಧ್ಯತೆ:

ವಿಶ್ವವಿದ್ಯಾನಿಲಯದ ಮಂಡಳಿಯು ತನ್ನ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಹಲವಾರು ವೈವಿಧ್ಯತೆಗಳನ್ನು ಅಳವಡಿಸಿಕೊಂಡಿದೆ. ಇಲ್ಲಿ ತನ್ನ ಎಲ್ಲಾ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಕಲಿಕೆಯಲ್ಲಿ ವೈವಿಧ್ಯತೆಯನ್ನು ಅಳವಡಿಸಿಕೊಳ್ಳಲು ಸಹಕರಿಸುತ್ತದೆ.
ವಿಚಾರಣೆ ಮತ್ತು ಅಭಿವ್ಯಕ್ತ ಪಡಿಸುವಲ್ಲಿ ಸ್ವಾತಂತ್ರ್ಯತೆ: ವಿಶ್ವವಿದ್ಯಾನಿಲಯದ ಮಂಡಳಿಯು ತನ್ನ ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಯಾವುದೆ ರೀತಿಯ ವಿಚಾರಣೆ ಮಾಡಲು ಸ್ವಾತಂತ್ರ್ಯತೆಯನ್ನು ನೀಡಿದೆ.

ಹೊಣೆಗಾರಿಕೆ:

ವಿಶ್ವವಿದ್ಯಾನಿಲಯದ ಮಂಡಳಿಯು ತನ್ನ ಸಾಧನೆಗೆ ಎಲ್ಲಾ ಸಿಬ್ಬಂದಿ, ವಿದ್ಯಾರ್ಥಿ ಮತ್ತು ಸಾರ್ವಜನಿಕರ ಸಹಾಯವನ್ನು ಸದಾ ಕಾಲ ನೆನೆಯುತ್ತದೆ.
ಕೆಳವರ್ಗದವರಿಗೆ ವಿದ್ಯಾಭ್ಯಾಸ: ವಿಶ್ವವಿದ್ಯಾನಿಲಯದ ಮಂಡಳಿಯು ಕೆಳವರ್ಗದ ವಿದ್ಯಾರ್ಥಿಗಳಿಗೂ ವಿದ್ಯಾಭ್ಯಾಸ ಒದಗಿಸಿಕೊಡುತ್ತದೆ.
ಹೊಂದಿಕೊಳ್ಳುವಿಕೆ ಮತ್ತು ಹೊಣೆಗಾರಿಕೆ: ವಿಶ್ವವಿದ್ಯಾನಿಲಯದ ಮಂಡಳಿಯು ತನ್ನ ವಿದ್ಯಾರ್ಥಿಗಳ ಉನ್ನತ ಭವಿಷ್ಯಕ್ಕಾಗಿ ತನ್ನ ಕೆಲಸದ ರೀತಿ, ನೀತಿಯಲ್ಲಿ ಬದಲಾವಣೆಯನ್ನು ಶ್ರೀಘ್ರವಾಗಿ ಅಳವಡಿಸಿಕೊಳ್ಳುತ್ತದೆ.

ಹೊಸತನ:

ವಿಶ್ವವಿದ್ಯಾನಿಲಯದ ಮಂಡಳಿಯು ತನ್ನ ಕೆಲಸದಲ್ಲಿ ಹೊಸತನವನ್ನು ಸದಾಕಾಲ ರೂಪಗೊಳಿಸಿ ತನ್ನ ಗುರಿಯನ್ನು ಮುಟ್ಟುತ್ತದೆ.
ಸಹಯೋಗ: ವಿಶ್ವವಿದ್ಯಾನಿಲಯದ ಮಂಡಳಿಯು ತನ್ನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೇರೆ-ಬೇರೆ ಸಂಸ್ಥೆಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ.