​                                                                                 

                                                                                      ವೈಶಿಷ್ಟ್ಯಗಳು

ಓಪನ್ ಡಿಸ್ಟೆನ್ಸ್ ಲರ್ನಿಂಗ್ ವಿಧಾನವು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನೀಡುವ ವಿಶಿಷ್ಟವಾದ ಮತ್ತು ಸ್ಫರ್ಧಾತ್ಮಕವಾದ ವಿಧಾನವಾಗಿದೆ.  

ವಿಶ್ವವಿದ್ಯಾನಿಲಯವು ಶಿಕ್ಷಣವನ್ನು ತಮ್ಮ ಕೆಲಸದ ಅಥವಾ ವಾಸ ಸ್ಥಳದಿಂದ ಓದಲು ಬಯಸುವವರಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸಿ ಕೊಡುತ್ತಿದೆ. ಈ ವಿಧಾನವನ್ನು ದೂರ ಶಿಕ್ಷಣ ಎಂದು ಕರೆಯುತ್ತಾರೆ. ಇದು ಭಾರತದಂತಹ ಅಭಿವೃದ್ಧಿ ಹೊಂದಿದ ದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಏಕೈಕ ಮಾರ್ಗ.

ದೂರ ಶಿಕ್ಷಣ ಕಾರ್ಯಕ್ರಮವನ್ನು ವಿಶೇಷವಾಗಿ ಈ ಕೆಳಗಿನವರಿಗೆ ವಿನ್ಯಾಸಗೊಳಿಸಲಾಗಿದೆ:

•    ಹಣದ ಅಭಾವದಿಂದ ಅಥವಾ ಬೇರೆ ಸಂದರ್ಭಗಳಲ್ಲಿ ತಮ್ಮ ಶಿಕ್ಷಣವನ್ನು ನಿಲ್ಲಿಸುವ ಅಭ್ಯರ್ಥಿಗಳಿಗೆ.

•    ದೂರದ ಪ್ರದೇಶಗಳಲ್ಲಿ ವಾಸಿಸುವ ಅಭ್ಯರ್ಥಿಗಳಿಗೆ.

•    ನಿಯಮಿತವಾದ ಕಾಲೇಜಿಗೆ / ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಸಾಧ್ಯವಾಗದ ಅಭ್ಯರ್ಥಿಗಳಿಗೆ

•    ಬೇರೆ ಕಡೆ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ

•    ಜ್ಞಾನಕ್ಕಾಗಿ ವಿದ್ಯಾಭ್ಯಾಸವನ್ನು ಮುಂದುವರೆಸುವವರಿಗೆ

•    ತಮ್ಮ ಕೌಶಲ್ಯವನ್ನು ನವೀಕರಿಸಲು ಇಚ್ಛಿಸುವವರಿಗೆ.